ಸುಸ್ವಾಗತ

ಭಗವಾನ್ ವಿಶ್ವಕರ್ಮ ಈ ಬ್ರಹ್ಮಾಂಡದ ಸೃಷ್ಠಿಕರ್ತ, ಅತ್ಯಂತ ಪರಿಪೂರ್ಣವಾಗಿರುವ ಈ ಸೃಷ್ಠಿಯು ತನ್ನ ನಿಯಮಾನುಸಾರ ಯಾವುದೇ ಅಡೆತಡೆಗಳಿಲ್ಲದೇ ಚಲಿಸುತ್ತಿರುವಂತೆ ನಿಮರ್ಾಣ ಮಾಡಿರುತ್ತಾನೆ. ಸೃಷ್ಠಿಗಳ ಪೈಕಿ ಮಾನವನಿಗೆ ಶ್ರೇಷ್ಠತೆಯನ್ನು ದಯಪಾಲಿಸಿರುತ್ತಾನೆ. ಆದ್ದರಿಂದ ವಿಶ್ವಕರ್ಮ ಭಗವಂತನನ್ನು ಬ್ರಹ್ಮಾಂಡ ಶಿಲ್ಪಿ ಎಂದು ಕರೆಯುತ್ತಾರೆ. ವಿಶ್ವಕರ್ಮ ಸಮಾಜದ ಮೂಲ ಭಗವಾನ್ ವಿಶ್ವಕರ್ಮ, ವಿಶ್ವಕರ್ಮನಿಗೆ ಐದು ಜನ ಮಕ್ಕಳು,

  • ಮನು
  • ಮಯ
  • ತ್ವಷ್ಠ
  • ಶಿಲ್ಪಿ
  • ವಿಶ್ವಜ್ಞ


ವಿಶ್ವಕರ್ಮ ಜನಾಂಗ ಇವರ ಅನುವಂಶಿಯರು. ಈ ಜನಾಂಗ ಐದು ಗೋತ್ರಗಳಾಗಿ ವಿಂಗಡಿಸಲ್ಪಟ್ಟಿದ್ದು, ಗೋತ್ರಗಳನ್ನು ಸದರಿ ಗೋತ್ರಗಳ ಪೂರ್ವಜರ ಹೆಸರಿನೊಂದಿಗೆ ಗುರುತಿಸಲಾಗಿದೆ.

  • ಸನಗ (ಮನುವಿನ ಪುತ್ರ)
  • ಸನಾತನ (ಮಯನ ಪುತ್ರ)
  • ಅಬುವನ (ತ್ವಷ್ಠರ ಪುತ್ರ)
  • ಪ್ರಸ್ತಾವನ (ಶಿಲ್ಪಿಯ ಪುತ್ರ)
  • ಸುಪರ್ಣ (ವಿಶ್ವಜ್ಞರ ಪುತ್ರ)

ಈ ಗೋತ್ರಗಳೊಳಗೆ ಹಲವಾರು ಉಪಗೋತ್ರಗಳಿವೆ.

ಅನಾದಿ ಕಾಲದಿಂದಲೂ ವಿಶ್ವಕರ್ಮ ಜನಾಂಗ ಕುಲಕಸುಬುಗಳನ್ನು ಮಾಡುತ್ತಾ ಬಂದಿರುತ್ತದೆ. ಪ್ರತಿ ಗೋತ್ರವು ತಮ್ಮ ಗೋತ್ರಕ್ಕೆ ಸಂಬಂಧಿಸಿದ ಕುಲಕಸುಬುಗಳನ್ನು ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದೆ. ಸೃಷ್ಠಿಕರ್ತ ಭಗವಾನ್ ವಿಶ್ವಕರ್ಮರಿಂದ ಬಳುವಳಿಯಾಗಿ ಪಡೆದಿರುವ ಸೃಜನ ಶೀಲತೆಯೂ ಅವರಿಗೆ ಪೀಳಿಗೆಯಿಂದ ಪೀಳಿಗೆಗೆ ವಗರ್ಾವಣೆಯಾಗುತ್ತಿದೆ. ಕಾಲಕಾಲಕ್ಕೆ ವಿಶ್ವಕರ್ಮದಿಂದ ಸೃಷ್ಠಿಯಾಗಲಿರುವ ಕಾಲಾತ್ಮಕ ಅದ್ಬುತ ಕೃತಿಗಳು ಇಂದಿಗೂ ವಿಶ್ವಕರ್ಮ ಜನಾಂಗಕ್ಕೆ ಒಲಿದಿರುವ ದೈವಾನುಗ್ರಹಕ್ಕೆ ಸಾಕ್ಷಿ ಹೇಳುತ್ತಿವೆ.

ವಿಶ್ವಕರ್ಮರು ನಿಮರ್ಿಸಿದ ಎಲ್ಲಾ ಕಲಾತ್ಮಕ ನಿಮರ್ಾಣಗಳು ಯಾವುದೇ ಧರ್ಮಕ್ಕೆ ಸೀಮಿತವಾಗಿರದೆ ಸಮಾಜದ ಸರ್ವರಿಗೂ, ಅವರವರ ಅವಶ್ಯಕತೆಗನುಗುಣವಾಗಿ ಇರುತ್ತವೆ. ಎಲ್ಲಾ ಧರ್ಮದವರಿಗೂ, ಅವರವರ ಆಚಾರ ವಿಚಾರ ಪರಂಪರೆಗಳಿಗೆ ಹೊಂದುವಂತೆ ಕಲಾತ್ಮಕವಾಗಿ ವಾಸ್ತುಶಿಲ್ಪ, ಆಭರಣ, ಕೆತ್ತನೆ, ಗೃಹೋಪಯೋಗಿ ವಸ್ತುಗಳು ಕೃಷಿ ಸಲಕರಣೆಗಳನ್ನು ರಚಿಸುವುದು ಈ ಸಮುದಾಯದ ವೈಶಿಷ್ಟ. ಪುರಾತನ ಕಾಲದಿಂದಲೂ ವಿಶ್ವಕರ್ಮ ನಿಮರ್ಿಸಿದ ಕಲಾಕೃತಿಗಳು ಶಿಲ್ಪಗಳು ಹಾಗೂ ಇತರ ಸಾಮಗ್ರಿಗಳು ಕಾಲದ ಪ್ರೀರಿಕ್ಷೆಯನ್ನು ಮೀರಿ ಇನ್ನು ಉಳಿದಿದ್ದು, ವಿಶ್ವಕರ್ಮರ ಅಭಿಜಾತ ಪ್ರತಿಭೆಗೆ ನಿದರ್ಶನ ನೀಡುತ್ತಿವೆ.

ಅತ್ಯಂತ ವೈಜ್ಞಾನಿಕವಾದ ಭಾರತೀಯ ವಾಸ್ತು ಶಿಲ್ಪ ವಿಶ್ವಕರ್ಮರ ಕೊಡಿಗೆಯಾಗಿದೆ. ವಾಸ್ತು ಶಿಲ್ಪದ ಪ್ರಕಾರದಲ್ಲಿ ವಿಶ್ವಕರ್ಮದ ಕೊಡುಗೆ ಅನನ್ಯವಾದುದು.

ಹಿಂದು ದೇವಾಲಯಗಳು :
ಶಸ್ತ್ರೋಕ್ತವಾದ ರೀತಿಯಲ್ಲಿ ಅತ್ಯಂತ ಕಲಾತ್ಮಕವಾಗಿ ಅಸಂಖ್ಯಾತ ಹಿಂದೂ ದೇವಾಲಯಗಳ ನಿಮರ್ಾಣ ಮಾಡಿದವರು ವಿಶ್ವಕರ್ಮರು. ದೇವತಾ ವಿಗ್ರಹಗಳನ್ನು ಅತ್ಯಂತ ನಾಜೂಕಾಗಿ, ದರ್ಶನಮಾತ್ರದಿಂದ ಭಕ್ತರು ಪರವಶವಾಗುವಂತಹ ಸುಂದರ ದೇವತೆಗಳ ವಿಗ್ರಗಳನ್ನು ನಿಮರ್ಾಣ ಮಾಡಿದರು ವಿಶ್ವಕರ್ಮರು. ದೇವಸ್ತಾನವನ್ನು ಅಲಂಕರಿಸುವ ಕೆತ್ತನೆ ಕೆಲಸಗಳು ಪೌರಾಣಿಕ ಹಾಗೂ ಸಮಕಾಲಿನ ಸಮಾಜದ ವಾಸ್ತವವನ್ನು ದೃಶ್ಯಕಾವ್ಯದಂತೆ ಕಣ್ಮುಂದೆ ತರುವಂತಿರುತ್ತದೆ.

ಬೌದ್ಧ ವಿಹಾರಗಳು :

ವಿಶ್ವಕರ್ಮರು ನಿಮರ್ಿಸಿರುವ ಬೌದ್ಧ ಶೈಲಿಯ ವೈವಿಧ್ಯಮಯ ವಾಸ್ತು ಶಿಲ್ಪಗಳು ವಿಶ್ವಕರ್ಮರ ಅದ್ಬುತ ಸಾಕ್ಷಿ ನುಡಿಯುತ್ತವೆ.

ಜೈನ ಬಸದಿಗಳು :
ಹಲವಾರು ಜೈನಬಸದಿಗಳು ಮುಗಿಲನ್ನು ಚುಂಬಿಸುವ ಗೊಮ್ಮಟೇಶ್ವರ ವಿಗ್ರಹಗಳು ಸಂಪೂರ್ಣವಾಗಿ ಜೈನ ಧರ್ಮದ ಆಶಯಗಳಂತೆ ನಿಮರ್ಿಸಿದರು ವಿಶ್ವಕರ್ಮರು. ವಿಶ್ವಕರ್ಮರು ನಿಮರ್ಿಸಿದ ಅಸಂಖ್ಯಾತ ಅದ್ಬುತಗಳ ಪೈಕಿ ಬೇಲೂರು, ಹಳೆಬೀಡು, ಅಜಂತಾ ಎಲ್ಲೋರ ಗುಹೆಗಳು, ಹಂಪಿ, ಬಾದಾಮಿಯ ದೇಗುಲಗಳು ಪ್ರಮುಖವಾದವು.

ಇತಿಹಾಸದುದ್ದಕ್ಕೂ ವಿಶ್ವಕರ್ಮರು ನಿಮರ್ಿಸಿದ ಕಲಾಕೃತಿಗಳು, ಕೆತ್ತನೆಗಳ ವಾಸ್ತು ಶಿಲ್ಪಗಳು ಅವುಗಳ ಕಲಾಶ್ರೇಷ್ಟತೆಯ ಕಾರಣ ಸಾಮಾಜಿಕ ಸಂರಕ್ಷಣೆ ಪಡೆದು ಇಂದಿಗೂ ದೇಶದ ಗತವೈಭವ ಹಾಗೂ ಶ್ರೀಮಂತಿಕೆಯನ್ನು ಸಾರುತ್ತಿವೆ.

 

Test Data